The BMRCL has come up with a no whistle blower policy of a different kind. Security persons manning the Namma metro platforms have been asked to do away with whistle to control crowd behavior and rely instead on verbal instructions.
ನಮ್ಮ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಎಚ್ಚರಿಕೆ ನೀಡುವ ಹಾಗೂ ಸರಿಯಾದ ಸ್ಥಳದಲ್ಲಿ ನಿಲ್ಲುವಂತೆ ಸೂಚಿಸುತ್ತಿದ್ದ ವಿಶಲ್ ನ್ನು ಸಿಬ್ಬಂದಿಗಳು ಇನ್ನುಮುಂದೆ ಬಳಸುವಂತಿಲ್ಲ. ನಮ್ಮ ಮೆಟ್ರೋದ ಪ್ಲಾಟ್‌ಫಾರಂನಲ್ಲಿ ಪ್ರಯಾಣಿಕರ ಬಗ್ಗೆ ಕಾಳಜಿವಹಿಸುವ ಸಿಬ್ಬಂದಿ ಇನ್ನುಮುಂದೆ ವಿಶಲ್ ಹೊಡೆಯುವಂತಿಲ್ಲ. ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಈ ಹೊಸ ನಿಯಮವನ್ನು ಬಿಎಂಆರ್ ಸಿಎಲ್ ಅನುಷ್ಠಾನಕ್ಕೆ ತಂದಿದೆ. ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಹಳದಿ ಪಟ್ಟಿ ಬಿಡಿಸಿದ್ದು, ರೈಲು ಬಂದು ನಿಲ್ಲುವವರೆಗೂ ಈ ಪಟ್ಟಿ ದಾಟಿ ಮುಂದಕ್ಕೆ ಹೋಗುವಂತಿಲ್ಲ. ಹಳಿ ಪಕ್ಕದ ಥರ್ಡ್ ರೇಲ್ ನಲ್ಲಿ ಹರಿಯುವ ವಿದ್ಯುತ್ ಅಪಾಯಕಾರಿಯಾಗಿರುವುದರಿಂದ ಹಳದಿ ಪಟ್ಟಿ ದಾಟದಂತೆ ಎಚ್ಚರವಹಿಸಲಾಗುತ್ತದೆ.